ಸಿನಿಮಾ ನಟಿಯರು ಯಾರೇ ಹುಡುಗರ ಜೊತೆ ಸುಳಿದಾಡಿದರೂ ಅಭಿಮಾನಿಗಳು ತಲೆ ಕೆದರಿಕೊಂಡು ಹುಡುಕಾಟ ಶುರುವಿಟ್ಟುಕೊಳ್ಳುತ್ತಾರೆ. ಆ ಹುಡುಗಳ ಕುಲ, ಗೋತ್ರ, ಜನ್ಮ ಜಾಲಾಡೋ ವರೆಗೂ ಅವರಿಗೆ ನೆಮ್ಮದಿಯಿರುವುದಿಲ್ಲ. ಅಂಥಾದ್ದರಲ್ಲಿ ತಮ್ಮ ನೆಚ್ಚಿನ ನಾಯಕಿಯ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದರೆ ಅಭಿಮಾನಿಗಳ ಎದೆಯೊಡೆಯದಿರುತ್ತಾ..? ಸದ್ಯಕ್ಕೆ ಕಿರಾತಕ ಚಿತ್ರದ ಚೆಲುವೆ ಓವಿಯಾ ಅವರ ವಿಚಾರದಲ್ಲಿ ಇದೇ ಆಗಿದೆ. ಹೌದು, ಓವಿಯಾ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. Oviya Leaked ಎಂಬ ಹ್ಯಾಶ್ ಟ್ಯಾಗ್ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಕಡಿಮೆ ಒಂದು ವಾರದಿಂದ ಟ್ರೆಂಡಿಂಗ್‌ನಲ್ಲಿದೆ. ಇನ್ನೂ ಹದಿನೇಳು ಸೆಕೆಂಡ್ ಇರುವ ಈ ವಿಡಿಯೋವನ್ನು ನೋಡಿ ಅನೇಕರು ಬೆಚ್ಚಿ ಬಿದ್ದರೆ, ಇನ್ನೂ ಕೆಲವರು ಓವಿಯಾ ಅವರಲ್ಲಿಯೇ ಈ ಕುರಿತು ಪ್ರಶ್ನೆ ಕೇಳಿದ್ದಾರೆ. ವೈರಲ್ ಆದ ವಿಡಿಯೋ ನಿಮ್ಮದೇನಾ ಎಂದಿದ್ದಾರೆ. ಇದಕ್ಕೆ ಓವಿಯಾ ಕೂಡ ಉತ್ತರವನ್ನು ನೀಡಿದ್ದಾರೆ. ನೋಡಿ ಮಜಾ ಮಾಡಿ ಎಂದಿದ್ದಾರೆ. ಮುಂದಿನ ಬಾರಿ ಪೂರ್ತಿ ವಿಡಿಯೋವನ್ನು ಹಂಚಿಕೊಳ್ಳುವುದಾಗಿ ಹೇಳಿದ್ದಾರೆ. ಈ ಮೂಲಕ ಅಭಿಮಾನಿಗಳನ್ನು ಅಚ್ಚರಿಗೆ ದೂಡಿದ್ದಾರೆ.